ಅನಾಥ ಮಕ್ಕಳ ಶಿಕ್ಷಣ
ಅನಾಥ ಮಕ್ಕಳ ಶಿಕ್ಷಣದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಬಹುದು.
Puneeth rajkumar Ashrayadhama
ನಾವು ಕಳೆದ 11ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಹೀಗೆ ಹಲವು ಜಿಲ್ಲೆಗಳಿಂದ ರಸ್ತೆ ಮೇಲೆ ಬಸ್ ನಿಲ್ದಾಣಗಳಲ್ಲಿ ಅನಾಥ ಸ್ಥಿತಿಯಲ್ಲಿ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಇರುವ ವ್ಯಕ್ತಿಗಳನ್ನು ಹಾಗೂ ಮಕ್ಕಳಾದಿಯಾಗಿ ವಯೋ ವ್ರದ್ಧರವರೆಗು ಎಲ್ಲಾ ವಯೋಮಾನದವರನ್ನು, ವಿಕಲ ಚೇತನರನ್ನು ಪೋಲಿಸರ ಹಾಗೂ ಗ್ರಾಮ ಪಂಚಾಯತ, ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಶ್ರಮಕ್ಕೆ ಕರೆತಂದು ಆರೈಕೆಮಾಡಿ, ಚಕಿತ್ಸೆ ಕೊಡಿಸಿ ಆರೈಕೆ ಮಾಡುತ್ತಿದ್ದೇವೆ.
ನಾವು ಪ್ರಾರಂಭದಲ್ಲಿ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮವೆಂದು ಪರಿಚಿತವಾಗಿದ್ದೆವು. ಪುನೀತ್ ರಾಜಕುಮಾರ್ ಸರ್ ಅವರ ಮಾನವೀಯ ಸೇವೆಯಿಂದ ಪ್ರಭಾವಿತರಾಗಿ, ಅವರ ಗೌರವದಲ್ಲಿ ನಮ್ಮ ಆಶ್ರಮದ ಹೆಸರನ್ನು ಪುನೀತ್ ರಾಜಕುಮಾರ್ ಆಶ್ರಯಧಾಮ ಎಂದು ಬದಲಾಯಿಸಿದ್ದೇವೆ.
ಈ ಆಶ್ರಮದಲ್ಲಿ 70 ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ. ಶಿರಸಿಯಲ್ಲಿ ಬಾಡಿಗೆ ಮನೆಯಿಂದ ಆರಂಭವಾಗಿ, ಮುಗದೂರಿನಲ್ಲಿ ಜಾಗ ಖರೀದಿ ಮಾಡಿ 7 ವರ್ಷಗಳಿಂದ ಆಶ್ರಮವನ್ನು ನಿರ್ವಹಿಸುತ್ತಿದ್ದೇವೆ. ಕಟ್ಟಡ ನಿರ್ಮಾಣದ 75% ಪೂರ್ಣಗೊಂಡಿದ್ದು, ಉಳಿದ ಭಾಗಕ್ಕೆ ಸಹಾಯ ಅಗತ್ಯ.
ದೂರವಾಣಿ
9481389187ನಾನು ಬಾಲಕನಾಗಿದ್ದ ಕಾಲದಲ್ಲಿ ಅನಾಥನಾಗಿ ಬೀದಿ-ಬೀದಿ ಅಲೆದಾಡುತ್ತಿದ್ದೆ. ಆಗ ನನಗೆ ಆಧಾರ ಯಾರೂ ಇರಲಿಲ್ಲ. ಆ ಸಮಯದಲ್ಲಿ ಈ ಸಮಾಜ ನನ್ನನ್ನು ಈ ಹಂತಕ್ಕೆ ಮೇಲೆತ್ತಿದ್ದು, ಸಮಾಜದ ಎಲ್ಲಾ ಜಾತಿ, ಧರ್ಮಗಳ ಜನರ ಸಹಕಾರ ಹಾಗೂ ದೇವರ ಕೃಪೆಯಿಂದ ನಾನು ಇವತ್ತು ಉತ್ತಮ ಮನುಷ್ಯನಾಗಿ ರೂಪುಗೊಂಡಿದ್ದೇನೆ.
ನಾವು ಈಗ ಪುನೀತ್ ರಾಜಕುಮಾರ್ ಅವರ ಸ್ಮರಣೆಯಲ್ಲಿ ನಮ್ಮ ಆಶ್ರಮವನ್ನು ಪುನೀತ್ ರಾಜಕುಮಾರ್ ಆಶ್ರಯಧಾಮ ಎಂದು ಬದಲಾಯಿಸಿದ್ದೇವೆ. ಸಹಾಯದೊಂದಿಗೆ, ನಾವೀಗ ಸಾವಿರಾರು ನಿರ್ಗತಿಕರಿಗೆ ಆಶ್ರಯ ಒದಗಿಸುತ್ತಿದ್ದೇವೆ.
ನಾವು ಅನಾಥರು, ವೃದ್ಧರು, ದಿಕ್ಕಿಲ್ಲದವರು ಹಾಗೂ ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಈ ಕಾರ್ಯಕ್ಕೆ ದಾನಿ, ಸ್ವಯಂಸೇವಕರು ಮತ್ತು ಸಮಾಜದ ಸಹಾಯ ಅನಿವಾರ್ಯ.