Puneeth rajkumar Ashrayadhama

ಅನಾಥರಿಗೆ ಸಹಾಯ ನೀಡಿ

ನಮ್ಮ ಸೇವೆಗಳು

Image
Image

ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಅಂಗಡಿಬೈಲಿನ ಬಸ್ ನಿಲ್ದಾಣದಲ್ಲಿ ಕಳೆದ ಕೆಲವು ದಿನಗಳಿಂದ ಅಂಗಡಿಬೈಲ್ ನ ಕೃಷ್ಣ ನರಸಿಂಹ ಹೆಗಡೆ ಎನ್ನುವವರು ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಕೊಳೆತು ಹೋಗಿ ಹುಳಗಳಾಗಿ ದುರ್ವಾಸನೆ ಬರುತ್ತಿದ್ದರು. ಇವರು ಮದುವೆಯಾಗದೆ ಒಂಟಿಯಾಗಿದ್ದು ಅನಾಥ ಸ್ಥಿತಿಯಲ್ಲಿ ಇದ್ದದ್ದರಿಂದ ಅಲ್ಲಿನ ಸ್ಥಳಿಯ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಜಿ ಎಮ್ ಶೆಟ್ಟಿಯವರು ಶಿರಸಿಯ ಸ್ಕೋಡ್ ವೆಸ್ ಸಂಸ್ಥೆಯ ಮುಖ್ಯಸ್ಥರಾದ ವೆಂಕಟೇಶ್ ನಾಯ್ಕರವರ ಸಂಪರ್ಕಮಾಡಿ ಸಲಹೆ ಕೇಳಿದಾಗ ವೆಂಕಟೇಶ್ ನಾಯ್ಕರವರು ಜಿ ಎಮ್ ಶೆಟ್ಟಿಯವರಿಗೆ ನನ್ನ ಸಂಪರ್ಕ ನೀಡಿ ಹಾಗೂ ನನಗೂ ಕೂಡ ಈ ವಿಷಯದ ಬಗ್ಗೆ ಚರ್ಚಿಸಿದ್ದರು. ನಂತರ ಜಿ ಎಮ್ ಶೆಟ್ಟಿಯವರು ನನ್ನನ್ನು ಸಂಪರ್ಕಿಸಿ ಕ್ರಷ್ಣ ಹೆಗಡೆಯವರ ಅಸಹಾಯಕತೆಯ ಬಗ್ಗೆ ತಿಳಿಸಿ ನಮ್ಮ ಆಶ್ರಮದಲ್ಲಿ ಸೇರಿಸಿಕೊಳ್ಳುವಂತೆ ಕೋರಿಕೊಂಡರು. ಮತ್ತು ಅಚವೆ ಗ್ರಾಮ ಪಂಚಾಯತ ಅಧ್ಯಕ್ಷರಾದ ರವರು ಕೂಡ ಕ್ರಷ್ಣ ಹೆಗಡೆಯವರನ್ನು ಆಶ್ರಮಕ್ಕೆ ಸೇರಿಸುವಂತೆ ಗ್ರಾಮ ಪಂಚಾಯತ ವತಿಯಿಂದ ಕೇಳಿಕೊಂಡರು.

ನಾನು ನಮ್ಮ ಆಶ್ರಮದ ತಂಡದೊಂದಿಗೆ ಅಂಕೋಲಾ ತಾಲೂಕಿನ ಅಂಗಡಿಬೈಲ್ ಗೆ ಹೋಗಿ ಅಚವೆ ಗ್ರಾಮ ಪಂಚಾಯತ ಪಿಡಿಓ ರವರಾದ ವಿಠ್ಠಲ್ ಬಾಂದಿ ರವರು, ಪೋಲಿಸ್ ಸಿಬ್ಬಂದಿಗಳಾದ ನಾಗರಾಜ ಗೌಡ ರವರು, ಉಗ್ರಾಣಿಗಳಾದ ನಾಗರಾಜ ಹಳ್ಳೇರ್ ರವರು ಹಾಗೂ ಸ್ಥಳೀಯ ಮುಖಂಡರುಗಳಾದ ನರಸಿಂಹ ಹೆಗಡೆ, ವಿಶ್ವನಾಥ್ ಹೆಗಡೆ, ಮಂಜುನಾಥ್ ಹೆಗಡೆ, ವಿಘ್ನೇಶ್ವರ ಹೆಗಡೆ, ಗಣೇಶ್ ಹೆಗಡೆ, ವಿಷ್ಣು ಭಟ್ಟ, ಶೇಖರ್ ಹೆಗಡೆ, ಮಾರುತಿ ಪಟಗಾರ, ರವೀಂದ್ರ ಭಟ್ಟ, ನಾರಾಯಣ ಭಟ್ಟ ರವರ ಸಮಕ್ಷಮದಲ್ಲಿ ಕ್ರಷ್ಣ ಹೆಗಡೆಯವರನ್ನು ರಕ್ಷಣೆ ಮಾಡಿ ಸಿದ್ದಾಪುರಕ್ಕೆ ಕರೆದುಕೊಂಡು ಬಂದಿದ್ದೇವೆ. ಇವರ ರಕ್ಷಣೆಯ ಸಂದರ್ಭದಲ್ಲಿ ಸ್ಥಳಿಯರಾದ ಗೊವಿಂದ ಭಟ್ ಹಾಗೂ ಇತರರು ನಮ್ಮ ಸೇವೆಗೆ ಆರ್ಥಿಕ ಸಹಾಯ ನೀಡಿದರು.

ಸಿದ್ದಾಪುರ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು ಸಿದ್ಧಾಪುರ ತಾಲೂಕಾ ಸರಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ. ಲೋಕೇಶ ವೈ ಆರ್ ರವರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ವರ್ಗ ದವರು ಸಹಕರಿಸುತ್ತಿದ್ದಾರೆ. ಮುಖ ಹಾಗೂ ಕುತ್ತಿಗೆಯ ಮತ್ತು ಗಂಟಲು ಭಾಗದಲ್ಲಿ ಕೊಳೆತು ಹೋಗಿದ್ದು ದೊಡ್ಡ ದೊಡ್ಡ ಹುಳಗಳಾಗಿದೆ. ಊಟ ಮಾಡಲಾಗದ ಸ್ಥಿತಿಯಲ್ಲಿರುವ ಇವರಿಗೆ ಮೂಗಿನ ಮೂಲಕ ಪೈಪ್ ಅಳವಡಿಸಿ ದ್ರವ ರೂಪದ ಆಹಾರ ನೀಡಲಾಗುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಿ ನಾವು ಕ್ರಷ್ಣ ಭಟ್ಟರ ಆರೈಕೆ ಮಾಡುತ್ತಿದ್ದೇವೆ. ಇವರ ರಕ್ಷಣೆಯಲ್ಲಿ ಸಹಕರಿಸಿದ, ಚಿಕಿತ್ಸೆಯಲ್ಲಿ ಹಾಗೂ ಆರೈಕೆಯಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.

ಭಟ್ಕಳದಲ್ಲಿ ಹಲವು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ತಿರುಗುತ್ತಿದ್ದ ಕ್ರಷ್ಣ ಮೊಗೇರ ಎನ್ನುವ ವ್ಯಕ್ತಿಯು ದಿನಾಂಕ 10-07-2024ರಂದು ಭಟ್ಕಳದ ಮುಟ್ಟಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್ ಪಾರ್ಮನಲ್ಲಿ ತಿರುಗಾಡುತ್ತಿರುವಾಗ ಬೆಂಗಳೂರಿನಿಂದ ಮುರುಡೇಶ್ವರದ ಕಡೆಗೆ ಬರುತ್ತಿದ್ದ ರೈಲಿನ ಅಡಿಗೆ ಆಕಸ್ಮಾತ್ತಾಗಿ ಬಿದ್ದು ಬಲಗೈ ತುಂಡಾಗಿ ಕಟ್ಟಾಗಿರುತ್ತದೆ. ತಕ್ಷಣ ಸಾರ್ವಜನಿಕರು ಇವರನ್ನು ಭಟ್ಕಳ ತಾಲೂಕಾ ಸರಕಾರಿ ಆಸ್ಪತ್ರೆಗೆ ಧಾಖಲಿಸಿ ನಂತರ ಕಾರವಾರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಧಾಖಲಿಸಿದ್ದರು. ಕಾರವಾರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಇವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ.

ಈತನು ಕಳೆದ ಹಲವಾರು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ಇರುವುದರಿಂದಾಗಿ ಈತನನ್ನು ಆರೈಕೆ ಮಾಡುವವರು ಯಾರು ಇಲ್ಲದೆ ಇರುವುದರಿಂದ ಸಾರ್ವಜನಿಕರು ಭಟ್ಕಳ ಸಹರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಭಟ್ಕಳ ಸಹರ ಪೋಲೀಸ್ ಠಾಣೆಯ ಪೋಲಿಸರು ಈ ಕ್ರಷ್ಣ ಮೊಗೇರ ಎನ್ನುವ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವಂತೆ ಕೋರಿಕೊಂಡ ಮೇರೆಗೆ ಕ್ರಷ್ಣ ಮೊಗೇರ ಅವರನ್ನು ಅಂಬ್ಯೂಲೆನ್ಸ್ ವಾಹನದಲ್ಲಿ ಕರೆತಂದು ನಮ್ಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳಲಾಯಿತು.

ಇವರ ರಕ್ಷಣೆಯಲ್ಲಿ ಸಹಕರಿಸಿದ, ಚಿಕಿತ್ಸೆಯಲ್ಲಿ ಹಾಗೂ ಆರೈಕೆಯಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.

Image